ಚಂದ್ರ ಚಕೋರಿ - ಕುಹು ಕುಹೂ ಕೋಗಿಲೆ lyrics in Kannada


 


ಕುಹು ಕುಹೂ ಕೋಗಿಲೆ

ಕೂಗಿದೆ ಯಾಕಂತೀಯಾ
ನಿನ್ನ ಕೇಳಿದೆ ಏನಂತೀಯಾ
ಕುಹು ಕುಹೂ ಕೋಗಿಲೆ
ಕೂಗಿದೆ ಯಾಕಂತೀಯಾ
ನಿನ್ನ ಕೇಳಿದೆ ಏನಂತೀಯಾ
ಪ್ರೀತಿ ಬಂತೂ ಅದಕ್ಕೀಗ
ಅದರಿಂದ ಹೊಸ ರಾಗ
ಕೇಳಿದೆ ಏನಂತೀಯಾ
ಸುಖವಾಗಿದೆ ಹೂಂ ಅಂತೀಯಾ
ಕುಹು ಕುಹೂ ಕೋಗಿಲೆ
ಕೂಗಿದೆ ಯಾಕಂತೀಯಾ
ನಿನ್ನ ಕೇಳಿದೆ ಏನಂತೀಯಾ
♫♫♫♫♫♫♫♫♫♫♫♫

ಗಂಗೆಯೇ ಕೇಳು
ಗಾಳಿಯೇ ಕೇಳು
ಇವಳಿಗೆ ನನ್ನ ಮನಸಿಡುವೆ
ಹೃದಯವ ತೆರೆದು

ಮನಸನು ಪಡೆದು
ಜನುಮದ ಪ್ರೀತಿಯ ನಾನೆರೆವೆ
ಪ್ರೀತಿಯ ಊರ ನಾಯಕಿಯೇ
ಮುತ್ತಿನ ತೇರ ದೇವತೆಯೇ
ನನ್ನ ಉಸಿರಿನಲಿ ನಿನ್ನ ಬಿಗಿದಿಡುವೆ
ಉಸಿರಿರೊವರೆಗೂ ನಾ ಪೂಜಿಸುವೆ
ಈ ಆಸೆಗೆ ಏನಂತೀಯಾ
ನನ್ನ ಭಾಷೆಗೆ ಹೂಂ ಅಂತೀಯಾ
ಕುಹು ಕುಹೂ ಕೋಗಿಲೆ
ಕೂಗಿದೆ ಯಾಕಂತೀಯಾ
ನಿನ್ನ ಕೇಳಿದೆ ಏನಂತೀಯಾ
♫♫♫♫♫♫♫♫♫♫♫♫

ಸಾವಿರ ಜನುಮ
ಇದ್ದರು ನನಗೆ
ನಿನ್ನವಳಾಗಿ ಉಳಿದಿರುವೆ
ಪ್ರೇಮದ ಕನಸ
ಕಾಣುವ ಕಣ್ಣಿಗೆ
ರೆಪ್ಪೆಗಳಾಗಿ ನಾನಿರುವೆ
ನಿನ್ನಂತರಂಗ ನಾನಲ್ಲವೇ
ನಿನ್ನಾಸೆ ಎಲ್ಲಾ ನನಗಲ್ಲವೇ
ಆ ಸಾಗರದಿ ನಾ ಮುಳುಗಿದರು
ಆ ಪ್ರಳಯದಲಿ ನಾ ಸಿಲುಕಿದರು
ನಿನ್ನ ಕೂಡುವೆ ಏನಂತೀಯಾ
ಜೊತೆ ಬಾಳುವೆ ಹೂಂ ಅಂತೀಯಾ
ಕುಹು ಕುಹೂ ಕೋಗಿಲೆ

ಕೂಗಿದೆ ಯಾಕಂತೀಯಾ

ನಿನ್ನ ಕೇಳಿದೆ ಏನಂತೀಯಾ
ಪ್ರೀತಿ ಬಂತೂ ಅದಕ್ಕೀಗ
ಅದರಿಂದ ಹೊಸ ರಾಗ
ಕೇಳಿದೆ ಏನಂತೀಯಾ
ಸುಖವಾಗಿದೆ ಹೂಂ ಅಂತೀಯಾ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು